ಕರ್ನಾಟಕ

ʼmeeshoʼಗೆ 5.50ಕೋಟಿ. ರೂ. ಪಂಗನಾಮ ಹಾಕಿದ ಖದೀಮರು ಅರೆಸ್ಟ್‌..!

ಮೀಶೋ (Meeshoo) ಕಂಪನಿಗೆ ವಂಚನೆ ಮಾಡುತಿದ್ದ ಗುಜರಾತ್ ಮೂಲದ ಮೂವರನ್ನ ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಮೀಶೋ (Meeshoo) ಕಂಪನಿಗೆ ವಂಚನೆ ಮಾಡುತಿದ್ದ ಗುಜರಾತ್ ಮೂಲದ ಮೂವರನ್ನ ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. meesho ಮುಖಾಂತರ ಗ್ರಾಹಕನ ರೀತಿ ಆರೋಪಿಗಳು ಖಾತೆ ಸೃಷ್ಟಿಸುತ್ತಿದ್ದರು.

ಅದೇ ರೀತಿ ತಮ್ಮದೇ ವಸ್ತುಗಳನ್ನು meesho ಮುಖಾಂತರ ಬುಕ್ ಮಾಡುತಿದ್ದರು. ಈ ವೇಳೆ ತಪ್ಪಾದ ಸ್ಥಳಕ್ಕೆ ಡೆಲವರಿ ನೀಡುವಂತೆ ಉಲ್ಲೇಖಿಸಿ, ಡೆಲವರಿ ವೇಳೆ ಸ್ಥಳ ಸಿಗದೇ ರಿಟರ್ನ್ ಆಗಿ ಬಂದ ವಸ್ತು meesho ನಿಂದ ಸೆಲರ್ ಗೆ ವಾಪಾಸ್ ಆಗುತ್ತಿತ್ತು. ತಾವೇ ಪರಿಶೀಲಿಸಿ ಡೆಲವರಿಗೆ ನೀಡಿದ್ದ ವಸ್ತು ಇದಲ್ಲ ಎಂದು ತೋರಿಸಿ meesho ಗೆ ವಂಚಿಸುತ್ತಿದ್ದ ಖದೀಮರು, ಬರೊಬ್ಬರಿ 5.50 ಕೋಟಿ ರೂ. ವಂಚನೆ ಮಾಡಿದ್ದಾರೆ. ಈ ಕೃತ್ಯ ನಡೆಸುತ್ತಿದ್ದ ಗುಜರಾತಿನ ಮೂವರನ್ನ ಸೈಬರ್ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.